Friday, May 1, 2009

ಮೇ ದಿನದ ಶುಭಾಶಯಗಳು






ಎಲ್ಲಾ ದುಡಿಯುವ ವರ್ಗಕ್ಕೂ ಜನತೆಗೂ ಮೇ ದಿನದ ಶುಭಾಷಯಗಳು..................................123ನೇ ಮೇ ದಿನ ಮತ್ತೆ ಬಂದಿದೆ. ಇಂದಿನ ಸಂದರ್ಭಕ್ಕೆ ಅದು ಬಹಳ ಮಹತ್ವದ ದಿನವಾಗಿ ಪರಿಣಮಿಸಿದೆ. ಏಕೆಂದರೆ ಮೇ ದಿನ ಅಂದಿನ ಸಂದರ್ಭದಲ್ಲಿ ಕಾರ್ಮಿಕರ ಮೇಲಿನ ಶೋಷಣೆಯ ವಿರುದ್ಧ, ಕಾರ್ಮಿಕರನ್ನು ಮನುಷ್ಯರಂತೆ ಕಾಣಬೇಕೆಂದು, ದುಡಿತದ ಸಮಯವನ್ನು 8 ಘಂಟೆಯ ಅವಧಿಗೆ ನಿಗದಿ ಪಡಿಸಬೇಕೆಂದು ಹೋರಾಡಿದ ದಿನವಾಗಿತ್ತು. ಅಂದು ನಡೆದ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟದಲ್ಲಿ ಹೋರಾಟದ ದಿನ ಮತ್ತು ಮಡಿದ ಸಂಗಾತಿಗಳ ನೆನಪಿಗಾಗಿ ಪ್ರತಿ ವರ್ಷ `ಮೇ ದಿನ'ವನ್ನು ಆಚರಿಸಲಾಗುತ್ತಿದೆ.

123 ವರ್ಷಗಳು ಕಳೆದರೂ ಇಂದಿಗೂ ಕಾರ್ಮಿಕರ ಮೇಲೆ ನಡೆಯುತ್ತಿರುವ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಮತ್ತು ಆಳುವ ವರ್ಗದ ಶೋಷಣೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ವಿಶ್ವದ ಅತಿ ಹೆಚ್ಚು ಕಾರ್ಮಿಕರು ಇಂದು 10-12 ಗಂಟೆಗೂ ಹೆಚ್ಚಿನ ಅವಧಿಯ ದುಡಿತವನ್ನು ಮಾಡುತ್ತಿದ್ದಾರೆ. ಬಂಡವಾಳಶಾಹಿಯ ನೀತಿಯು ಕಾರ್ಮಿಕರನ್ನು ಕಡಿಮೆ ಕೂಲಿ ಕೊಟ್ಟು ಹೆಚ್ಚು ಕೆಲಸ ಮಾಡಿಸಿಕೊಳ್ಳುವ ವಿಧಾನವನ್ನು ಹಲವು ಶತಮಾನಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ದುಡಿಯುವ ವರ್ಗದ ಜನರ ಜೀವನ ಮಾತ್ರ ಸುಧಾರಿಸಲಿಲ್ಲ. ಏಕೆಂದರೆ ಎಲ್ಲಿಯವರೆಗೂ ಶೋಷಣೆ ಕೊನೆಗಾಣುವುದಿಲ್ಲವೂ ಅಲ್ಲಿಯವರೆಗೂ ದುಡಿಯುವ ಜೀವಕ್ಕೆ ನೆಮ್ಮದಿ ಎಂಬುದು ಇಲ್ಲವಾಗಿದೆ.ಹೋರಾಟದ ಮೂಲಕ ಪಡೆದ 8 ಘಂಟೆಯ ಅವಧಿಯ ದುಡಿತದ ಸಮಯವನ್ನು ಇಂದು ಎಲ್ಲರಿಗೂ ಇಲ್ಲವಾಗಿದೆ. ಕೆಲವು ಕಡೆ 15-17 ಘಂಟೆಯ ಅವಧಿಯ ದುಡಿತ ನಡೆದುಕೊಂಡು ಬರುತ್ತಿದೆ. ಅಷ್ಟು ಸಮಯದ ದುಡಿತ ಮಾಡುವುದಕ್ಕೆ ಯಾರು ಒಪ್ಪುವುದಿಲ್ಲ ಆದರೆ ಆಳುವ ವರ್ಗದ ನೀತಿಯಿಂದಾಗಿ ಮತ್ತು ಜೀವನವನ್ನು ನಡೆಸಲು ಜನತೆಯ ಮೇಲೆ ಹೇರಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾರ್ಮಿಕರು ಹೆಚ್ಚಿನ ಸಮಯವನ್ನು ದುಡಿತದಲ್ಲಿ ತೊಡಗಿದ್ದಾರೆ.
ನನಗೆ ತಿಳಿದಂತೆ ಕೆಲವರು 4-5 ವರ್ಷದ ಹಿಂದೆ ಹೆಚ್ಚಿನ ಸಮಯದಲ್ಲಿ ಒಂದು ಕಡೆ ಸೇರುತ್ತಿದ್ದೇವು ಆದರೆ ಇಂದು ಅದು ಸಾಧ್ಯವಾಗುತ್ತಿಲ್ಲ. ಅವರು ಇಂದು 14-15 ಘಂಟೆಯ ದುಡಿತದಲ್ಲಿ ವಾರದ ರಜೆಯನ್ನು ಸಹ ಬಿಡದೆ ದುಡಿಯುತ್ತಿದ್ದಾರೆ. ನಗರಗಳಲ್ಲಿನ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಹಳ್ಳಿಗಳಲ್ಲಿ ರೈತರು ಉದ್ಯೋಗಕ್ಕಾಗಿ ನಗರಗಳಲ್ಲಿ ಬರತೊಡಗಿದ್ದು ಅವರು ಸಹ ಜಿಗುಪ್ಸೆಯಿಂದಾಗಿ ಪರಿತಪಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಅವರಿಗೆ ಸರಿಯಾದ ಕೂಲಿ ಇಲ್ಲದಿರುವುದು, ವ್ಯವಸಾಯ ಮಾಡಿ ಬೆಳೆದ ವಸ್ತುಗಳಿಗೆ ಇಂದು ರೈತರಿಗೆ ಸರಿಯಾದ ಬೆಲೆಯೇ ಸಿಗುತ್ತಿಲ್ಲ. ನಗರಗಳಲ್ಲಿ ಮಾತ್ರ ವಿಪರೀತ ಬೆಲೆ ಏರಿಕೆಯ ಆಹಾರ ವಸ್ತುಗಳು ಸಿಗುತ್ತದೆ. ಅಂದರೆ ಇದರ ಮಧ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲಾಭ ಕೋರತನದಿಂದಾಗಿ ಹಳ್ಳಿ-ನಗರದ ಸಾಮಾನ್ಯ ಜನತೆ ಜೀವನ ನಡೆಸುವುದೇ ಕಷ್ಟಕರವಾಗಿದೆ.ಇತ್ತೀಚಿನ ಆರ್ಥಿಕ ಕುಸಿತದಿಂದಾಗಿ ಕಾರ್ಮಿಕರು ಹೆಚ್ಚೆಚ್ಚು ನಿರುದ್ಯೋಗಿಗಳಾಗುತ್ತಿದ್ದಾರೆ. ಸರಿಯಾದ ಉದ್ಯೋಗವಿಲ್ಲದೆ ಹಲವು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವುದು ಸಹ ನೋಡಿದ್ದೇವೆ. ನಮ್ಮ ದೇಶದಲ್ಲಿ ಆಳುವ ವರ್ಗದ ಬಂಡವಾಳಶಾಹಿ ಪ್ರೇರಿತ ರಾಜಕೀಯ ಪಕ್ಷಗಳಿಗೆ ಉದ್ಯೋಗ ಸೃಷ್ಟಿಯ ಅಗತ್ಯತೆ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಬೆಂಗಳೂರಿನಲ್ಲೂ ಕಂಡಂತೆ ಹಲವು ಕಾರ್ಖಾನೆಗಳು ಕಛೇರಿಗಳು ಮತ್ತು ಇತರೇ ಮೇಲ ವರ್ಗದ ಉದ್ಯೋಗವಕಾಶಗಳು ಎಂಬ ಅಬ್ಬರದಲ್ಲಿ ತೊಡಗಿಸಿಕೊಂಡಿದ್ದ ಬಂಡವಾಳದಾರರು ಇಂದು ಉದ್ಯೋಗಗಳನ್ನು ಆರ್ಥಿಕ ಕುಸಿತದ ನೆಪದಿಂದ ಬಹಳಷ್ಟು ಕಡಿತ ಮಾಡುತ್ತಿದ್ದಾರೆ.ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದ ಅನಿವಾರ್ಯತೆ ಇಂದು ಅಗತ್ಯವಿದೆ. ಇಂದಿನ `ಮಹಾ ಸಮರ' ಲೋಕಸಭಾ ಚುನಾವಣೆಯಲ್ಲಿ ಜನತೆಯ ಪ್ರಶ್ನೆಗಳ ಬದಲು ವಯುಕ್ತಿಕ ವಿಷಯಗಳು ಅಬ್ಬರದ ಪ್ರಚಾರವನ್ನು ಪಡೆದುಕೊಳ್ಳುತ್ತಿದೆ. ಇಂದಿನ ಅಗತ್ಯದ ಬಗ್ಗೆ ಸೂಕ್ತವಾದ ವಿಷಯಗಳನ್ನು ರಾಜಕೀಯ ಪಕ್ಷಗಳು ಚರ್ಚಿಸುತ್ತಿಲ್ಲ.ವಿಶ್ವದಲ್ಲೂ ಇಂದು ಆರ್ಥಿಕ ಕುಸಿತದ ಪರಿಣಾಮವಾಗಿ ಕಾರ್ಮಿಕರು ಬೀದಿಪಾಲಾಗುತ್ತಿರುವುದನ್ನು ನೋಡುತ್ತಿದ್ದೇವೆ. ಬಹಳಷ್ಟು ಕಡೆಗಳಲ್ಲಿ ಪ್ರತಿರೋಧಗಳನ್ನು ಕಂಡು ಬಡುತ್ತಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಕೊಳ್ಳದ ಬಂಡವಾಳದಾರರು ಇದು ಸಾಮಾನ್ಯ ವಿಷಯವಾಗಿ ಪರಿಗಣಿಸುತ್ತಿದ್ದಾರೆ. ಅಂದರೆ ದುಡಿಯುವ ವರ್ಗದ ಮೇಲೆ ಇರುವ ಉದಾಸೀನತೆ ಮತ್ತು ಲಾಭಕೋರತನದ ಪ್ರತೀಕವಾಗಿದೆ.ಕಳೆದ 123 ವರ್ಷಗಳಲ್ಲಿ ಅದೆಷ್ಟು ಕಾಕಾರ್ಮಿಕರು ಆತ್ಮಹತ್ಯೆಗಳಾಗಿದೆವೂ, ಅದೆಷ್ಟು ಪ್ರಮಾಣದಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟಗಳು ನಡೆದವೂ, ಆದರೂ ಆಳುವ ವರ್ಗ ಮತ್ತು ಬಂಡವಾಳದಾರರಿಗೆ ನೀತಿಗಳು ಮಾತ್ರ ಬದಲಾಗಲಿಲ್ಲ. ಶೋಷಣೆ ಮಾತ್ರ ನಡೆಸಿಕೊಂಡು ಬರುತ್ತಿದ್ದಾರೆ. ಇದರ ವಿರುದ್ಧದ ದೊಡ್ಡ ಪ್ರಮಾಣದ ಧ್ವನಿ ಎತ್ತುವ ಹೋರಾಟ ರೂಪುಗೊಳ್ಳಬೇಕು ಅದಕ್ಕಾಗಿ ನಾವು ದುಡಿಯಬೇಕಾಗಿದೆ

ಕರಿಬಸಪ್ಪ