Friday, March 6, 2009

ಪತ್ರಿಕಾ ಹೇಳಿಕೆ

ಬಂಡಾಯ ಸಾಹಿತಿ, ಸಂಶೋದಕ, ಕವಿ ಎಸ್.ಎಸ್.ಹಿರೇಮಠರವರ ನಿಧನಕ್ಕೆ ಸಿಪಿಐ(ಎಂ) ಸಂತಾಪ

ಬಂಡಾಯ ಸಾಹಿತಿ, ಸಂಶೋದಕ, ಕವಿ ಎಸ್.ಎಸ್.ಹಿರೇಮಠರವರ ನಿಧನಕ್ಕೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ಇತ್ತೀಚೆಗೆ ತೀವ್ರವಾಗಿದ್ದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಳಗಾಂ ಜಿಲ್ಲೆಯ ಬೈಲಹೊಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು, ಪತ್ನಿ ಯನ್ನು ಅವರು ಅಗಲಿದ್ದಾರೆ.ಪ್ರೋ.ಎಸ್.ಎಸ್.ಹಿರೇಮಠರವರು ಬೈಲಹೊಂಗಲದ ಸಾಣೆಕೊಪ್ಪ ಗ್ರಾಮದವರು, ಬೆಳಗಾವಿಯಲ್ಲಿ ಪದವಿ ಶಿಕ್ಷಣ ಮುಗಿಸಿ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರಲ್ಲದೇ ಕನ್ನಡದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಯವರ ನೆಚ್ಚಿನ ವಿದ್ಯಾರ್ಥಿಯಾಗಿದ್ದರು ಅವರ ಮಾರ್ಗದರ್ಶನ ಪಡೆಯುತ್ತಿದ್ದರು. ನಂತರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಹರಪನಹಳ್ಳಿ, ಹಡಗಲಿ ಅಲ್ಲದೇ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿ ಕೊಟ್ಟೂರಿನ ವೀರಶೈವ ವಿದ್ಯವರ್ಧಕ ಸಂಘದ ಕಾಲೇಜಿನ ಪ್ರಾಚಾರ್ಯರಾಗಿ ಇತ್ತೀಚೆಗೆ ನಿವೃತ್ತರಾದರು.1977 ರ ತುರ್ತು ಪರಿಸ್ಥಿತಿಯ ನಂತರದಲ್ಲಿ ಮಾರ್ಕ್ಸ್ವಾದ್ ವಿಚಾರಧಾರೆಗೆ ಆಕ್ರ್ಶಿತರದರು ಪ್ರಜಾಸತ್ತಾತ್ಮಕ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶೇಷವಾಗಿ ಬಂಡಾಯ ಸಾಹಿತ್ಯ ಸಂಘಟನೆ, ಸಮುದಾಯ ಸಾಂಸ್ಕೃತಿಕ ಸಂಘಟನೆ, ದಲಿತ ಸಂಘಟನೆ ಮುಂತಾದ ಚಳುವಳಿ ಹಾಗೂ ಸಂಘಟನೆಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದರು.ರೈತ - ಕಾರ್ಮಿಕರ ಚಳುವಳಿ ಬೆಳವಣಿಗೆಗೂ ಅವರ ಒತ್ತಾಸೆ ಇತ್ತು. ಹೀಗಾಗಿ ಅವರ ವೃತ್ತಿ ಜೀವನದಲ್ಲಿಯೂ ಹಲವಾರು ಅಡೆ-ತಡೆಗಳನ್ನು ಎದುರಿಸಿದ್ದರು, ರೈತ ಕಾರ್ಮಿಕರ ಪ್ರಶ್ನೆಗಳಾಧಾರದಲ್ಲಿ ಜಿಲ್ಲಾ ಮಟ್ಟದಲ್ಲಿ ಸಮುದಾಯದಿಂದ ಹಲವಾರು ಸಾಂಸ್ಕೃತಿಕ ಜಾಥಾಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಹುಮುಖ ಪ್ರತಿಭೆಯ ಹಿರೇಮಠರವರು ನವ್ಯ, ಬಂಡಾಯದ ಕಾವ್ಯದಲ್ಲಿ ಕೃಷಿ ಮಾಡಿದವರು. ಬಯಕೆ, ಬಯಲು, ಕೆಂಪು ನೆಲದ ಹಾಡು, ಕಪ್ಪು ಸೂರ್ಯನ ಕೆಂಪು ಹಾಡು, ಇತ್ಯಾದಿ ಕಾವ್ಯ ಮತ್ತು ಜಾತ್ರೆಗಳು, ಹಬ್ಬಗಳು ಮುಂತಾದ ಸಂಶೋಧನೆ ಗ್ರಂಥ, ಅಲ್ಲದೇ ಕನ್ನಡ ಜನ ಸಂಸ್ಕೃತಿಯ ಭಾಗವನ್ನಾಗಿಸಲು ಯತ್ನಿಸಿದ್ದಾರೆ.ಹಿರೇಮಠರ ನಿಧನ ಪ್ರಗತಿಪರ ಪ್ರಜಾಸತ್ತಾತ್ಮಕ ಜನ ಚಳುವಳಿಗೆ ಆದ ನಷ್ಟ. ಅವರ ನಿಧನಕ್ಕೆ ಸಂತಾಪವನ್ನು ಕುಟುಂಬಕ್ಕೆ ಸಾಂತ್ವನವನ್ನು ಸಿಪಿಐ(ಎಂ) ವ್ಯಕ್ತಪಡಿಸಿದೆ.

(ಎಸ್.ವೈ.ಗುರುಶಾಂತ್)
ಕಾರ್ಯದರ್ಶಿ ಮಂಡಳಿ ಸದಸ್ಯರು